Dear all, In this post I am going to analyse the Japan disaster in my words. The post is in Kannada. Here I have highlighted some similar events which took place around the words some years ago. Also I lit about the helpless of the human beings in such events though we are far more advanced in technology.
ಇತಿಹಾಸವು ಪ್ರಕೃತಿಯ ಅನೇಕ ರುದ್ರನರ್ತನಗಳನ್ನು ಮೂಕಪ್ರೇಕ್ಷಕನಾಗಿ ತನ್ನ ಗರ್ಬದಲ್ಲಿ ಸೇರಿಸಿಕೊಳ್ಳುತ್ತಾ ಬಂದಿದೆ. ಈ ಸಹಸ್ರಮಾನದ ಆದಿಯಲ್ಲಿ ಗುಜರಾತಿನ ಕಚ್ ಮತ್ತು ಬುಜ್‌ಗಳಲ್ಲಾದ ಭೂಕಂಪನ, ೨೦೦೪ ಡಿಸೆಂಬರ್‌ನಲ್ಲಾದ ಭೀಕರ ಸುನಾಮಿ, ಅಮೆರಿಕಾವನ್ನು ಕಂಗೆಡಿಸಿದ ೨೦೦೮ರ ಕತ್ರೀನಾ ಭೀಕರ ಚಂಡಮಾರುತ, ಹೇಟಿ ಎಂಬ ಅಮೆರಿಕಾ ಖಂಡದ ಒಂದು ಪುಟ್ಟ ದ್ವೀಪದಲ್ಲಾದ ಭಾರಿ ಭೂಕಂಪನ, ಇವುಗಳು ಇತ್ತೀಚೆಗೆ ನಡೆದ ಮನು ಕುಲ ಕಂಡ ಭಾರಿ ದುರಂತಗಳು. ಈ ಎಲ್ಲವುಗಳ ನೆನಪು ಮಾಸುವ ಮುನ್ನವೇ ಮತ್ತೊಮ್ಮೆ ಪ್ರಕೃತಿ ತನ್ನ ಅಟ್ಟಹಾಸ ಮೆರೆದಿದೆ. ಈ ಬಾರಿ ಪ್ರಕೃತಿಯ ಅಟ್ಟಹಾಸಕ್ಕೆ ಗುರಿಯಾದುದು ಏಶಿಯಾದ ಒಂದು ಪುಟ್ಟ ರಾಷ್ಟ್ರ ಜಪಾನ್. ಹೌದು ಭೂಕಂಪನ ಮತ್ತು ಸುನಾಮಿಗಳು ತಮ್ಮ ಆಟವನ್ನು ಈ ಬಾರಿ ಜಪಾನೀಯರಿಗೆ ತೋರಿಸಿವೆ. ಆದರೆ ಜಪಾನ್ ಜನತೆಗೆ ಇದೇನು ಹೊಸದಲ್ಲ. ಇದೇ ರೀತಿಯ ಪರಿಸ್ಥಿತಿ ಸುಮಾರು ನೂರು ವರ‍್ಷಗಳ ಹಿಂದೆಯೂ ಅಂದರೆ ಸುಮಾರು ೧೯೨೩ ರ ಹೊತ್ತಿನಲ್ಲಿಯೂ ಬಂದಿತ್ತು. ಆಗ ಸುಮಾರು ೩೦,೦೦೦ ಜನ ಜಲಸಮಾದಿಯಾಗಿದ್ದರು. ಆದರೆ ಈ ಬಾರಿ ಇನ್ನೂ ಹೆಚ್ಚಿನ ಅನಾಹುತವಾದಂತೆ ಕಾಣುತ್ತದೆ.
ಜಪಾನ್ ಒಂದು ಪುಟ್ಟ ದೇಶ. ಈ ದೇಶವು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಪ್ರಪಂಚದಲ್ಲಿಯೇ ಮುಂಚೂಣಿಯಲ್ಲಿರುವ ಒಂದು ರಾಷ್ಟ್ರ. ಎರಡನೆ ಮಹಾಯುದ್ಧದಲ್ಲಿ ಅಮೆರಿಕಾದ ಅಣು ಬಾಂಬ್ ಧಾಳಿಗೆ ಗುರಿಯಾಗಿ ಅಪಾರ ನಷ್ಟವನ್ನು ಅನುಭವಿಸಿತು. ಆದರೆ ಅದೆಲ್ಲವನ್ನೂ ಮೀರಿ ಮತ್ತೊಮ್ಮೆ ತಲೆಯೆತ್ತಿ ವಿಷ್ವದ ಬೃಹತ್ ಶಕ್ತಿಶಾಲಿ ರಾಷ್ಟ್ರಗಳಲ್ಲಿ ಒಂದಾಗಿ ನಿಂತಿತು. ಜಪಾನಿನ ಈ ಕ್ಷಿಪ್ರ ಗತಿಯ ಬೆಳವಣಿಗೆ ಅಮೆರಿಕಾವನ್ನೇ ನಾಚಿಸುವಂಥದ್ದು. ಆದರೆ ಪ್ರಕೃತಿಯ ಮುಂದೆ ಎಲ್ಲರೂ ಕುಬ್ಜರು ಎಂಬುದನ್ನು ಕಾಲ ಮತ್ತೊಮ್ಮೆ ನಿರೂಪಿಸಿದೆ.
ಜಪಾನಿನ ಸುನಾಮಿ ಪೀಡಿತ ಸ್ಥಳಗಳ ದೃಶ್ಯ ಮನ ಕಲಕುವಂಥದ್ದು. ಈ ಸುನಾಮಿಯು ಇಡಿ ಊರಿಗೆ ಊರನ್ನೇ ಕೊಚ್ಚಿಕೊಂಡು ಸಾಗರದ ಒಡಲಿಗೆ ಹಾಕಿದೆ. ಪ್ರಾಣ ಹಾನಿ ಆಸ್ತಿಪಾಸ್ತಿ ಹಾನಿಯನ್ನು ಇನ್ನೂ ಅಂದಾಜು ಮಾಡಲು ಸಾಧ್ಯವಾಗಿಲ್ಲ. ಸುಮಾರು ೪೦,೦೦೦,೦ ಮನೆಗಳ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಮೊಬೈಲ್ ಸೇವೆ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಗಾಯಗೊಂಡ ಹಾಗು ಬದುಕಿ ಉಳಿದ ಜನರ ಆಕ್ರಂದನ ಮುಗಿಲು ಮುಟ್ಟಿದೆ. ಇವರೆಲ್ಲರೂ ತಮ್ಮ ದುರ್ದೈವಕ್ಕೆ ಮರುಗುವಂತಾಗಿದೆ. ನೀವು ವಿಜ್ಞಾನದಲ್ಲಿ ಹಾಗು ತಂತ್ರಜ್ಞಾನದಲ್ಲಿ ಎಷ್ಟೇ ಮುಂದುವರಿದಿದ್ದರೂ ನನ್ನ ಹತ್ತಿರ ನಿಮ್ಮ ಆಟ ಏನು ನಡೆಯುವದಿಲ್ಲ ಎಂದು ಪ್ರಕೃತಿ ಮತ್ತೊಮ್ಮೆ ಮನು ಕುಲಕ್ಕೆ ಸಾರಿ ಹೇಳಿದೆ. ಇಂತಹ ಸಮಯದಲ್ಲಿ ಮಡಿದವರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಗಾಯಗೊಂಡವರಿಗೆ ಆ ನೋವನ್ನು ಸಹಿಸಿಕೊಳ್ಳುವ ಷಕ್ತಿಯನ್ನು ನೀಡೆಂದು ದೇವರಲ್ಲಿ ಪ್ರಾರ್ಥಿಸುವುದನ್ನು ಬಿಟ್ಟರೆ ನಮಗೆ ಇನ್ನೇನೂ ದಾರಿ ಇಲ್ಲ. ಮುಂದಿನ ದಿನಗಳಲ್ಲಾದರು ಮಾನವನ ಮೇಲೆ ಪ್ರಕೃತಿ ಇಷ್ಟು ಉಘ್ರ ಕೋಪವನ್ನು ತಾಳದಿರಲೆಂದು ಆಶಿಸೋಣ ಅಲ್ಲವೇ? ಅದಕ್ಕೆ ಸರಿಯಾಗಿ ಮಾನವನ ಪ್ರಕೃತಿಯ ಮೇಲಿನ ದೌರ್ಜನ್ಯ ನಿಲ್ಲಬೇಕು ಅಲ್ಲವೇ?
ಈ ಘಟನೆಗಳನ್ನು ನೋಡಿದರೆ ಡಿ.ವಿ.ಜಿ. ಅವರ ಮಂಕು ತಿಮ್ಮನ ಕಗ್ಗವೊಂದು ನೆನಪಾಗುತ್ತದೆ.
---------
ಸ್ವಾಭಾವಿಕವ ಮರೆತು ನಭಕೇಣಿ ಹೂಡುವುದುಮ್ ।
ಅಭಾಸವನು ಸತ್ಯವೆಂದು ಬೆಮಿಸುವುದುಮ್ ।।
ಸೌಭಾಗ್ಯಗಳನರಸಿ ದೌರ್ಭಾಗ್ಯಕ್ಕೀಡಹುದುಮ್ ।
ಅಭಿಶಾಪ ನರಕುಲಕೆ -- ಮಂಕುತಿಮ್ಮ
No comments:
Post a Comment